ಕಾವ್ಯ ಸಂಗಾತಿ
ಪ್ರೀತಿಯ ಸದ್ದು
ಮಾಜಾನ್ ಮಸ್ಕಿ
ನಿನ್ನ ಪ್ರೀತಿಯೇ ರೆಕ್ಕೆಗಳಾಗಿವೆ
ಮನದಲ್ಲಿ
ನಿನ್ನ ನೆನಪುಗಳ ಸದ್ದೇ
ಹೃದಯದ ಬಡಿತ -ಮಿಡಿತ
ಕೊನೆ ಇರದ ಬಾಂಗಣಕ್ಕೆ
ಸಮುದ್ರ ಉಕ್ಕೇರಿ ಚುಂಬಿಸುತ್ತಿದೆ
ಅದು ನಿನ್ನ ಸಾಂಗತ್ಯದ ಸಂಕೇತ……
ನಂಬಲಾರೆಯ ಇನಿಯ
ನೋಡಿಲ್ಲಿ
ನನ್ನ ಕಣ್ಣ ಅಕ್ಷಿ ಪಟದಲ್ಲಿ
ನಿನ್ನ ರೂಪವೇ ತುಂಬಿದೆ
ಬೇರೇನೂ ಕಾಣಲಾರೆ
ಅಕ್ಷರಗಳನ್ನು ಪೋಣಿಸಿ
ಪ್ರೀತಿಯ ಪರಿ ಹೇಳಲಾಗುವುದೇ
ವಜ್ರದಂತೆ ಹೊಳೆಯುವ ಒಂದು
ಕಣ್ ಹನಿ ಇಣುಕುತ್ತಿದೆ
ಸಾಕಲ್ಲವೇ ನಿನ್ನ ಪ್ರೀತಿಗೆ ಸಾಕ್ಷಿ……